ಬ್ರಿಟನ್ನಿನ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಆರ್ಥರ್ ಹಾರ್ಡೆನ್‌ರವರು ೧೮೬೫ರ ಅಕ್ಟೋಬರ್ ೧೨ರಂದು ಮಾಂಚೆಸ್ಟರ್ನಲ್ಲಿ ಜನಿಸಿದರು. ಹಾರ್ಡೆನ್‌ರವರು ೧೮೯೮ರಲ್ಲಿ ಸಕ್ಕರೆಯ ಕಿಣ್ವನದ ( ) ಬಗ್ಗೆ ಪ್ರಯೋಗಗಳನ್ನು ನಡೆಸಿದರು. ಅಂತಹ ಪ್ರಕ್ರಿಯೆಯಲ್ಲಿ ಝೈಮೇಸ್ () ಎಂಬ ಕಿಣ್ವದ () ಪಾತ್ರವಿದೆ ಎಂಬುದಾಗಿ ಅವರು ಕಂಡುಹಿಡಿದರು. ಹಾಗೆ ನೋಡಿದರೆ ಅನೇಕ ಕಿಣ್ವಗಳ ಮಿಶ್ರಣವಾಗಿರುವ ಝೈಮೇಸ್‌ನನ್ನು ಎಜುರ್ಡ್ ಬುಕ್ನರ್ರವರು (೧೮೬೦-೧೯೧೭) ೧೮೮೭ರಲ್ಲಿಯೇ ಕಂಡುಹಿಡಿದಿದ್ದರು. ನಂತರ ಹಾರ್ಡೆನ್ ಮತ್ತು ಅವರ ಸಹಚರರು ಝೈಮೇಸ್‌ನಲ್ಲಿ ಎರಡು ವಿರುದ್ಧ ಸ್ವಭಾವಗಳ ವಸ್ತುಗಳಿವೆ ಎಂಬುದಾಗಿ ಕಂಡುಹಿಡಿದರು. ಮೊದಲನೆಯದು ಉಷ್ಣ-ಸಂವೇದಕ (-) ವಸ್ತುವಾದರೆ, ಇನ್ನೊಂದು ಉಷ್ಣ-ಸ್ಥಿರ (-) ವಸ್ತುವಾಗಿದೆ ( ‘-’ -) ಎಂಬುದಾಗಿ ಗೊತ್ತಾಯಿತು. ಥಾಮಸ್ ಗ್ರಹಾಮ್‌ರವರು (೧೮೦೫-೧೮೬೯) ಕಂಡುಹಿಡಿದಿದ್ದ ಅಪೋಹನ ಪ್ರಕ್ರಿಯೆಯ ವಿಧಾನದಿಂದ ಹಾರ್ಡೆನ್‌ರವರು ಆ ಎರಡೂ ವಸ್ತುಗಳನ್ನು ಬೇರ್ಪಡಿಸುವುದರಲ್ಲಿ ಯಶಸ್ವಿಯಾದರು. ಅದರಿಂದ ಉಷ್ಣ-ಸ್ಥಿರ ವಸ್ತುವಾದ ಕೊ-ಎನ್ಝೈಮ್ ಸ್ವಭಾವದಲ್ಲಿ ಕಲಿಲ ವಸ್ತುವಲ್ಲ (-) ಎಂಬುದು ದೃಢವಾಯಿತು. ಕಿಣ್ವನ ಪ್ರಕ್ರಿಯೆಗೆ ಕಿಣ್ವ (), ಸಹ-ಎನ್ಝೈಮ್ (-), ಅಧಃಸ್ತರ () ಎಂಬ ಮೂರು ಘಟಕಗಳು ಅವಶ್ಯಕವಾಗಿವೆ ಎಂಬುದಾಗಿ ಹಾರ್ಡೆನ್‌ರವರು ತೋರಿಸಿಕೊಟ್ಟರು. ಆ ಪ್ರಕ್ರಿಯೆಯ ವೇಗವನ್ನು ವರ್ಧಿಸಲು ಫಾಸ್ಫೇಟ್‌ಗಳನ್ನು ಸೇರಿಸಬೇಕಾಗುತ್ತದೆ, ಇಲ್ಲದಿದ್ದರೆ ಪ್ರಕ್ರಿಯೆ ಬಹಳ ನಿಧಾನಗತಿಯಿಂದ ನಡೆಯುತ್ತದೆ ಎಂಬುದನ್ನೂ ಸಹ ಅವರು ಕಂಡುಹಿಡಿದರು. ಈ ಸಂಶೋಧನೆಗಾಗಿ ಹಾರ್ಡೆನ್‌ರವರಿಗೆ ೧೯೨೯ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು [ಜರ್ಮನಿಯ ಜೈವಿಕ ರಸಾಯನವಿಜ್ಞಾನಿ ಹಾನ್ಸ್ ವಾನ್ ಯೂಲರ್-ಚೆಪ್ಲಿನ್‌ರವರ (೧೮೭೩-೧೯೬೪) ಜೊತೆ] ನೀಡಲಾಯಿತು. ಹಾರ್ಡೆನ್‌ರವರು ೧೯೪೦ರ ಜೂನ್ ೧೭ರಂದು ಬಕಿಂಗ್‌ಹ್ಯಾಮ್‌ಷೈರಿನಲ್ಲಿ ನಿಧನರಾದರು. == ಉಲ್ಲೇಖಗಳು ==